Wednesday, March 4, 2009

ಪಪ್ಪು ಪಾಸ್ ಹೋಗಯಾ

ಪುಟ್ಟವನಾಗಿದ್ದಾಗಿನಿಂದಲೂ ನನಗೆ ಮೊದಲ ರಾಂಕ್ ಬಂದ ನೆನಪಾಗಲೀಯಾವುದೇ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದದ್ದಾಗಲೀ ಆದದ್ದಿಲ್ಲಅಕಸ್ಮಾತ್ ಏನಾದರೂ ಬಂದರೆ ಅದು ಮೊದಲನೆಯದಲ್ಲದ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಬಹುಮಾನವೇ ಆಗಿರುತ್ತಿತ್ತುಅದೃಷ್ಟವಶಾತ್ ನಾನು ಎಂದೂ ಫೇಲ್ ಆಗಲಿಲ್ಲ ಎಂಬುದೇ ಖುಶಿಯ ವಿಷಯ.


ಪ್ರೈಮರಿ ತರಗತಿಯಲ್ಲಿದ್ದಾಗ ನಾನು ನನ್ನ ಅಕ್ಕನ ಬಾಲವಾಗಿ ಸ್ಕೂಲಿಗೆ ಹೋಗುತ್ತಿದ್ದೆಏನು ಮಾಡಬೇಕೆಂದರೂ ಅಕ್ಕನ ಪರವಾನಗಿಯೊಂದಿಗೇ ಎಲ್ಲವೂ ನಡೆಯುವುದುಮಲ್ಪೆಯಲ್ಲಿ ವಾಸವಾಗಿದ್ದು ಪ್ರತಿದಿನ ಉಡುಪಿಗೆ ಸ್ಕೂಲಿಗೆ ಹೋಗುತ್ತಿದ್ದುದರಿಂದ,ನಮ್ಮ ಬಳಿ ಸಾಕಷ್ಟು ಲಗೇಜು ಇರುತ್ತಿತ್ತು.. ನಿರಂತರ ಸುರುಯುವ ಮಳೆಗೆಂದು ರೈನ್ಕೋಟುಛತ್ರಿಶಾಲೆಯ ಪುಸ್ತಕಗಳು ಹಾಗೂ ಊಟದ ಪರಿಕರಗಳುಇವನ್ನೆಲ್ಲಾ ಹೊತ್ತು ಬಸ್ಸಿನಲ್ಲಿ ತೂರಿ ಶಾಲೆ ತಲುಪುವಲ್ಲಿ ಅಕ್ಕನ ಮಾತು ಕೇಳದೆಯೇ ತಪ್ಪಿಸಿಕೊಂಡರೆಂಬ ಭಯ ನನಗೆ.


ಆಗ ಅಕ್ಕ ಸಿನೇಮಾಕ್ಕೆ ಹೋಗಬೇಕೆಂದರೆ ನಾನು ಬಾಲಂಗೋಚಿಯಾಗಿ ಹೋಗುವುದು ಅನಿವಾರ್ಯನನ್ನ ದೊಡ್ಡಪ್ಪಂದಿರ ಮಕ್ಕಳ ಜೊತೆ ಅಕ್ಕಅವರ ಬಾಲಂಗೋಚಿಯಾಗಿ ನಾನುಇಂಟರ್ವೆಲ್ ನಲ್ಲಿ ಅವರೆಲ್ಲಾ ಕೊಕಾ ಕೋಲಾ (ಆಗ ಕೋಕ್ ಬೆಲೆ ೬೦ ಪೈಸೆ)ಕುಡಿದರೆ ಅದು ಇಷ್ಟವಿಲ್ಲದ ನನಗೆ ಪ್ಯಾರೀಸ್ ನ ಗಟ್ಟಿ ಟಾಫಿ (ಬೆಲೆ ೧೦ ಪೈಸೆ). ಅಲ್ಲೂ ನನಗೆ ಸಲ್ಲಬೇಕಾದ ಮೊಬಲಗು ಸಲ್ಲುತ್ತಿರಲಿಲ್ಲಸ್ಕೂಲಿನಲ್ಲಿ ವಾರ್ಷಿಕ ಆಟೋಟದ ದಿನದಲ್ಲಿ ಕಪ್ಪೆ ರೇಸ್ ನಲ್ಲಿ ನಾನು ಭಾಗವಹಿಸಿದ್ದೆರೇಸ್ ಪ್ರಾರಂಭಿಸಲು ಸೀಟಿ ಊದಿದ ನಂತರ ಎಲ್ಲರೂ ಕುಪ್ಪಳಿಸುವದನ್ನು ಪ್ರಾರಂಭಿಸಿದರೂ ನಾನು ಅಲ್ಲೇ ಅಕ್ಕನ ಪರವಾನಗಿಗಾಗಿ ಕಾಯುತ್ತಿದ್ದೆನಾನು ಕುಪ್ಪಳಿಸುವ ವೇಳೆಗೆಎಲ್ಲರೂ ವಾಪಸ್ಸಗಿದ್ದರು..


ಮುಂದಿನ ತರಗತಿಗಳ ಅಭ್ಯಾಸ ನನಗೆ ಬೆಂಗಳೂರಿನಲ್ಲಿಶಾಲೆಯ ಕ್ರಿಕೆಟ್ ಟೀಮ್ ಸೇರಬೇಕೆಂದು ನನ್ನ ಆಸೆಎದುರು ಮನೆಯ ಕೃಷ್ಣಪ್ರಸಾದ ಯಾವಾಗಲೂ ಆಟೋಟಗಳಲ್ಲಿ ಮುಂದುನಾನೂ ಕ್ರಿಕೆಟ್ ಸೇರಲು ಬಹಳಷ್ಟು ಪೈರವೀ ನಡೆಸಿದೆಆದರೆ ಟೀಮ್ ಸೇರಲು ಇಲ್ಲವೇ ನಾನೊಂದು ಬ್ಯಾಟನ್ನು ಪ್ರತಿದಿನ ಶಾಲೆಗೆ ಒಯ್ಯಬೇಕಿತ್ತು (ಅರ್ಥಾತ್ ನನ್ನ ಬಳಿ ರಿಸೋರ್ಸಸ್ ಇರಬೇಕಿತ್ತುಇಲ್ಲ ಒಳ್ಳೆಯ ಆಟಗಾರನಾಗಬೇಕಿತ್ತು.. ಎರಡೂ ಇಲ್ಲದ ನಾನು ನನ್ನ ಕ್ಲಾಸಿನ 'ಬಿಟೀಮಿನ ಹನ್ನೆರಡನೆಯ ಖಿಲಾಡಿಯಾಗಿ ಸೇರಿಕೊಂಡೆ-- ಗಮನಿಸಿಇದು ನನ್ನ ಕ್ಲಾಸಿನ ಬಿ ಟೀಮ್... ಶಾಲೆಯದ್ದಲ್ಲನಲವತ್ತು ಜನರ ಕ್ಲಾಸಿನಲ್ಲಿ ಹದಿನೈದು ಹುಡುಗಿಯರಿದ್ದರೆಂದು ಇಟ್ಟುಕೊಂಡರೆ ನಾನು ಕೆಳಗಿನಿಂದ ಮೂರನೆಯವನಾಗಿದ್ದೆ (ಅಲ್ಲೂ ಕೆಳಗಿನಿಂದಲೂ ಪ್ರಥಮ ಸ್ಥಾನ ಗಿಟ್ಟಿಸುವ ಭಾಗ್ಯ ನನಗಿರಲಿಲ್ಲ).


ಬಹುಶಃ ನನ್ನ ಟ್ಯಾಲೆಂಟು ದೈಹಿಕ ಚಟುವಟಿಕೆಗಳಲ್ಲಿರಲ್ಲವೇನೊ ಅಂದುಕೊಂಡು ನಾನು ಫೈನ್ ಆರ್ಟ್ ಕಡೆಗೆ ಗಮನ ಕೊಡಲು ಪ್ರಾರಂಭ ಮಾಡಿದೆಮೊದಲು ಸಂಗೀತದ ಕ್ಲಾಸಿಗೆ ಸೇರಿದೆ -- ಬಚ್ಚಲುಮನೆಯಲ್ಲಿ ಅಕಸ್ಮಾತ್ ಹಾಡಿದರೆ ನನ್ನ ಧ್ವನಿಯನ್ನು ಕೇಳಿ ನಾನೇ ಬೆಚ್ಚಿಬೀಳುವಂಥ ಅಮರೀಶ್ ಪುರಿಯ ಧ್ವನಿಯಿದ್ದ ನನಗೆ ಈ ಪ್ರಯೋಗ ಹೆಚ್ಚು ಸಫಲತೆಯನ್ನು ನೀಡಲಿಲ್ಲನಂತರ ಕೊಳಲು ಬಾರಿಸಲು ಕಲಿಯುವುದೆಂದು ನಿರ್ಧಾರಿತವಾಯಿತುಆದರೆ ಕೆಲವೇ ದಿನಗಳಲ್ಲಿ ಅದನ್ನೂ ಬಿಟ್ಟುಕೊಡಬೇಕಾಯಿತುಯಾಕೆಂದು ನಾನು ಹೇಳುವುದಕ್ಕಿಂತ ಆಗ ಅಲ್ಲಿದ್ದಮಾತನಾಡುವುದನ್ನು ಆಗಷ್ಟೇ ಕಲಿಯುತ್ತಿದ್ದ ನನ್ನ ಸೋದರತ್ತೆಯ ಮಗನ ಮಾತುಗಳೇ ಸಾಕು: “ಮೆಸ್ತ್ರು ಫೂಟ್ ಬಾರಿಸೋ ಶೀರಾಮ ಅಂದ್ರುಅವನು ಊದಿದಫೂತ್ ನಾಯಿಮರಿ ಕಿಲುಚ್ಕೊಂಡಂಗೆ ಕಿಲುಕ್ಚೊಂಬಿಡ್ತು"


ಸ್ವಲ್ಪದಿನ ನಾನು ತಬಲಾ ಕಲಿತೆ. ಆದರೆ ನಾನೆ ಜಾಕಿರ್ ಹುಸೇನ್ ಆಗುವ ಮೊದಲೇ ಅಪ್ಪನಿಗೆ ಬೆಂಗಳೂರಿನಿಂದ ಮೈಸೂರಿಗ ವರ್ಗವಾಯಿತು. ರೂಪಾಯಿ ಅರವತ್ತಕ್ಕೆ ಕೊಂಡ ತಬಲಾವನ್ನು ಆರು ತಿಂಗಳು ಉಪಯೋಗಿಸಿ ಅಷ್ಟಕ್ಕೇ ಮಾರಿದ್ದು ನನ್ನ ದೊಡ್ಡ ಸಾಧನೆಯಾಗಿತ್ತು. ಬಹುಶಃ ಬಿಸನೆಸ್ ಮ್ಯಾನೇಜ್ಮೆಂಟಿನಲ್ಲಿ ನನಗಿರಬಹುದಾದ ಟ್ಯಾಲೆಂಟಿಗೆ ಅದು ಏಕಮಾತ್ರ ಪುರಾವೆಯಿದ್ದೀತು.


ಈ ಮಧ್ಯ ಅಪ್ಪ ನನಗೆ ಒಂದು ಪುಟ್ಟ ಚೆಸ್ ಬೋರ್ಡು ಕೊಡಿಸಿದರುಫೈನ್ ಆರ್ಟ್ ಇಲ್ಲವಾದರೇನು ಬಹುಶಃ ಬೌದ್ಧಿಕ ಚಟುವಟಿಕೆಯಲ್ಲಿ ನನ್ನ ಟ್ಯಾಲೆಂಟಿರಬಹುದೇನೋ ಅಂತ ಪರೀಕ್ಷಿಸುವ ಸಮಯ ಬಂದಿತ್ತೆನ್ನಿಸುತ್ತದೆಸ್ವಲ್ಪದಿನ ನಾನು ಚೆಸ್ ಆಡಿದೆ.ಅಂಥ ಸೀರಿಯಸ್ಸಾಗಿ ಅದನ್ನ ಕೈಗೆತ್ತಿಕೊಳ್ಳಲಿಲ್ಲವಾದರೂ ನಾನು ನನ್ನ ಗೆಳೆಯನಿಗೆ ಚೆಸ್ ಕಲಿಸುವ ಮಟ್ಟಿಗಾದೆನನ್ನ ಖಾಸಂಖಾಸ್ ಗೆಳೆಯ ಮುರಳಿ ತನ್ನ ಹೊಸ ಚೆಸ್ ಬೋರ್ಡನ್ನು ಕೊಂಡಾಗ ಅವನಿಗೆ ಕಾಯಿಗಳನ್ನು ಯಾವ ದಿಕ್ಕಿನಲ್ಲಿ ಚಲಾಯಿಸಬೇಕೆಂದು ಹೇಳಿಕೊಟ್ಟೆಒಂದು ಆಟ ಆಡೋಣವೇ ಅಂದ... ಮೊದಲ ಆಟದಲ್ಲೇ ನಾನು ಚೆಕ್ ಮೇಟ್ ಆಗಿದ್ದೆ!


ಹೈಸ್ಕೂಲಿಗೆ ಬಂದಾಗ -- ಎಂಟನೆಯ ತರಗತಿಯಲ್ಲಿ ನಾನು ತರಗತಿಯ ನಾಯಕನಾಗಲು ಮೊದಲ ಬಾರಿಗೆ ಚುನಾವಣೆಗೆ ನಿಂತೆ.ಸುಮಾರು ನೂರು ಜನರಿದ್ದ ತರಗತಿಯಲ್ಲಿ ಹದಿನೈದು ವೋಟುಗಳು ನನಗೆ ಬಿದ್ದುವುಆದರೂ ಸಮಧಾನದ ವಿಷಯವೆಂದರೆ ನನ್ನ ಮುಂದೆ ಇಬ್ಬರಿದ್ದರೂ (ಅವರು ನಾಯಕಉಪನಾಯಕರಾಗಿ ನಿಯಮಿಸಲ್ಪಟ್ಟರುನನ್ನ ಹಿಂದೆಯೂ ಇಬ್ಬರಿದ್ದು ನಾನು ನಡುಮಧ್ಯದಲ್ಲಿದ್ದೆ.


ನನ್ನ ಜೀವನದ ಮೊದಲ ಸಾಧನೆ ಹತ್ತನೆಯ ತರಗತಿಯಿಲ್ಲಿ ಕಾಣಿಸಿತುನಮ್ಮ ಶಾಲೆಯ ವಾರ್ಷಿಕ ಸಂಚಿಕೆಗೆ ನಾನು ವಿದ್ಯಾರ್ಥಿ ಸಂಪಾದಕನಾದೆಇದರಲ್ಲಿ ನನ್ನ ಸಾಧನೆಯೇನೂ ಇರಲಿಲ್ಲನಾನು ಟ್ಯೂಷನ್ ಗೆ ಹೋಗುತ್ತಿದ್ದ ನಮ್ಮ ಕ್ಲಾಸ್ ಮಾಸ್ತರು ಅನಂತಪದ್ಮನಾಭಾಚಾರ್ ನಮ್ಮ ಮನೆಯ ಬಳಿಯಿದ್ದುನಾನು ಅವರ ಶಾಲೆಯ (ಆಮ್ವಿದ್ಯಾರ್ಥಿಯಲ್ಲದೇಮನೆಯ (ಖಾಸ್)ವಿದ್ಯಾರ್ಥಿಯಾದ್ದರಿಂದ ಈ ಗೌರವ ನನಗೆ ಸಂದಿತ್ತುಇದರಲ್ಲಿ ಸ್ಫರ್ಧೆಯಿರಲ್ಲಿಲ್ಲಸಂಚಿಕೆಗೆ ನಮ್ಮಪ್ಪ ಒಂದು ಲೇಖನವನ್ನು ನನ್ನ ಹೆಸರಿನಲ್ಲಿ ಬರೆದು ಕೊಟ್ಟಿದ್ದರು.

ಕಾಲೇಜಿನಲ್ಲಿ ನನ್ನದು ಹೇಳಿಕೊಳ್ಳುವಂಥ ಸಾಧನೆಗಳೇನೂ ಇರಲಿಲ್ಲಸಾಧಿಸಲು ನಾನು ಕಾಲೇಜಿಗೆ ಹೋಗಬೇಕಿತ್ತಷ್ಟೆಆದರೆ ಚಾಮರಾಜಪೇಟೆಯ ನಮ್ಮ ಮನೆಯಿಂದ ಮಲ್ಲೇಶ್ವರದಲ್ಲಿರುವ ನಮ್ಮ ಕಾಲೇಜಿನ ನಡುಮಧ್ಯದಲ್ಲಿ ಮೆಜೆಸ್ಟಿಕ್ ಬರುತ್ತಿದ್ದದ್ದುಅಲ್ಲಿ ಹದಿನೈದು ಥಿಯೇಟರುಗಳಿದ್ದದ್ದು ನನ್ನ ತಪ್ಪೇಆದರೆ ಇಷ್ಟು ಮಾತ್ರ ನಿಜ... ಜೇಬಿನಲ್ಲಿ ದುಡ್ಡಿಲ್ಲದೇ ಮೆಜೆಸ್ಟಿಕ್ ನಲ್ಲಿ ನಿಲ್ಲಲು ಸಾಧ್ಯವಾಗದ ಪ್ರತಿಯೊಂದು ದಿನವೂ ನಾನು ತಪ್ಪದೇ ಕಾಲೇಜಿಗೆ ಹೋಗಿದ್ದೆಕಾಲೇಜಿನಲ್ಲಿ ಸುರೇಶನೆಂಬ ಗೆಳೆಯನಿದ್ದಅವನು ಅದ್ಭುತವಾಗಿ ಕನ್ನಡದಲ್ಲಿ ಬರೆಯುತ್ತಿದ್ದಅವನ ಬರವಣಿಗೆಯನ್ನು ಕಾಲೇಜಿನ ಗೋಡೆಪತ್ರಿಕೆಯಲ್ಲಿ ಹಚ್ಚುತ್ತಿದ್ದು ಅವನು ಕಾಲೇಜಿನಲ್ಲಿ ಸಾಕಷ್ಟು ಖ್ಯಾತನಾಗಿದ್ದನಾನು ಕನ್ನಡದ ವಿದ್ಯಾರ್ಥಿಯಲ್ಲನನ್ನ ಸಬ್ಜೆಕ್ಟು ಸಂಸ್ಕೃತವಾಗಿತ್ತುಆದರೂ ಸುರೇಶನ ಸುತ್ತಮುತ್ತ ಓಡಾಡುತ್ತಾಅವನ ಜೊತೆ ಸೇರಿ ಏನಾದರೊಂದು ಆಗಾಗ ಬರೆಯುತ್ತಿದ್ದುದರಿಂದ ನಾನು ಕನ್ನಡ ವಿಭಾಗದಲ್ಲಿ ಪರಿಚಿತನಾಗಿದ್ದೆ.ಹೀಗಾಗಿ ಕಾಲೇಜಿನ ಕನ್ನಡ ಸಂಘಕ್ಕೆ ಕಾರ್ಯದರ್ಶಿಯನ್ನು ನಿಯಮಿಸುವ ಸಮಯ ಬಂದಾಗ ಮೇಷ್ಟ್ರು ಸುರೇಶನನ್ನು ಕೇಳಿದರು.ಅವನು ಕಾರ್ಯದರ್ಶಿಯಾಗಲು ಒಪ್ಪಲಿಲ್ಲವಾದ್ದರಿಂದ ಪಕ್ಕದಲ್ಲಿದ್ದ ನನಗೆ ಆ ಕೆಲಸ ಹಚ್ಚಲಾಯಿತುಮಿಕ್ಕ ಎಲ್ಲ ಹುದ್ದೆಗಳೂ ಚುನಾಯಿತ ಹುದ್ದೆಗಳಾಗಿದ್ದವುನಾನು ಸ್ಪರ್ಧಿಸುವ ಧೈರ್ಯ ಮಾಡಿರಲಿಲ್ಲಆದ್ದರಿಂದಈ ಹುದ್ದೆಯೂ ನಾನು ಸಂಪಾದಿಸಿದ್ದಲ್ಲವೆಂದಾಯಿತುಅದೇ ವರ್ಷ ನಾನು ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಪಾದಕ ಮಂಡಳಿಗೆ ಆಯ್ಕೆಯಾದೆಇದು ಮಾತ್ರ ನಾನು ಸಂಪಾದಿಸಿದ್ದೆನ್ನಬಹುದು ಇದಕ್ಕೆ ನಮ್ಮ ಬರವಣಿಗೆಯ ನಮೂನೆಗಳನ್ನು ಸಲ್ಲಿಸಬೇಕಾಗಿತ್ತುಆ ವೇಳೆಗೆ ನನ್ನ ಒಂದೆರಡು ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ನಾನೇ ಆಯ್ಕೆಯಾಗುವೆನೆಂಬ ಹುಂಬ ಖಾತ್ರಿ ನನಗಿತ್ತು.. ಆದರೆ ಆಶ್ಚರ್ಯವೆಂದರೆಇದೇ ರೀತಿ ತಮ್ಮ ಬರವಣಿಗೆಯ ಆಧಾರದ ಮೇಲೆ ಆಯ್ಕೆಯಾದವರು ಒಬ್ಬಿಬ್ಬರಲ್ಲ -- ಐದು ಮಂದಿ! (ಅವರ ಮಧ್ಯ ಸಿಹಿಕಹಿ ಚಂದ್ರು ಕೂಡಾ ಇದ್ದ ಎಂಬುದು ಮುಖ್ಯವಲ್ಲದ ಆದರೆ ನನಗೆ ಮಹತ್ವದ ಮಾತು)...


ಕಾಲೇಜು ಬಿಟ್ಟನಂತರ ನಾನು ಕಥೆಬರೆಯುವ ಕಾಯಕವನ್ನು ಮುಂದುವರೆಸಿದೆಅದರ ಜೊತೆಗೇ ಕಥಾಸ್ಫರ್ಧೆಗಳಲ್ಲಿ ಭಾಗವಹಿಸುತ್ತಿದ್ದೆಪ್ರಜಾವಾಣಿ ಸ್ಫರ್ಧೆಯಲ್ಲಿ ಸತತ ಭಾಗವಹಿಸಿದ್ದಕ್ಕೆ ಬಂದದ್ದು ಎರಡನೆಯ ಬಹುಮಾನಮತ್ತು ಕೆಲ ಸಮಾಧಾನಕರ ಬಹುಮಾನಗಳುಗುಲಬರ್ಗಾ ವಿಶ್ವವಿದ್ಯಾನಿಲಯದವರು ಜಯತೀರ್ಥ ರಾಜಪುರೋಹಿತರ ಹೆಸರಿನಲ್ಲಿ ಒಂದು ಕಥಾಸ್ಫರ್ಧೆ ಮಾಡಿದರೆಅದರಲ್ಲೂ ಎರಡನೆಯ ಬಹುಮಾನಕ್ಲಾಸಿನಲ್ಲಿ ನಾನು ಪಡೆದ ಅತ್ಯುನ್ನತ ರಾಂಕ್ ಮೂರನೆಯದು(ಸಾಮಾನ್ಯವಾಗಿ ಹತ್ತರಿಂದ ಇಪ್ಪತ್ತೈದರ ನಡುವೆ ಇರುತ್ತಿದ್ದೆ). ಕಾಲೇಜಿನಲ್ಲಿ ಒಂದು ವರ್ಷ ಫರ್ಸ್ಟ್ ಕ್ಲಾಸ್ ಬಂದರೆ ಮುಂದಿನ ವರ್ಷ ಸೆಕೆಂಡು ರಾಂಕಿನ ಪ್ರಶ್ನೆ ಕನಸಿನ ಮಾತು...... ನನ್ನ ಕಥಾಸಂಕಲನ "ಮಾಯಾದರ್ಪಣ"ದ ಹಸ್ತಪ್ರತಿಯನ್ನು ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿಗಾಗಿ ಕಳಿಸಿದಾಗ ನನಗೆ ಬಹುಮಾನ ಬಂತು.. ಆದರೆ ನನ್ನ ಜೊತೆಯಲ್ಲಿ "ಕಂಧೊಂಸೆ ಕಂಧೆ ಮಿಲ್ತೇ ಹೈಅಂತ ಈ ಪ್ರಶಸ್ತಿಯನ್ನು ಹಂಚಿಕೊಂಡು ನಿಂತಿದ್ದವರು ಭಾಗೀರಥಿ ಹೆಗಡೆ ಮತ್ತು 'ಪ್ರಭಾ' (ಎಚ್ಗೋಪಾಲಕೃಷ್ಣ)


ಹೀಗೆ ಎಂದಿಗೂ ಫರ್ಸ್ಟ್ ಬರದ ನನಗೆ ಇದ್ದಕ್ಕಿದ್ದ ಹಾಗೆ "ಅತ್ಯುತ್ತಮ ಕನ್ನಡ ಇಂಡಿಕ್ ಬ್ಲಾಗ್ ಪ್ರಶಸ್ತಿಬಂದಿದೆಯೆಂಬ ಸುದ್ದಿ ಕೇಳಿ ಎಷ್ಟು ಖುಶಿಯಾಗಿರಬೇಕು ಯೋಚಿಸಿಪ್ರಶಸ್ತಿಗೆ ನಾನು ನಾಮಿನೇಟ್ ಆಗಿದ್ದೆ ಎಂಬ ಸುದ್ದಿಯೂ ನನಗೆ ತಿಳಿದಿರಲ್ಲಿಲ್ಲಸಂಪದದಲ್ಲಿಶ್ರೀನಿಧಿ ಎಂಬವರು ಬರೆದಾಗ ಪುಳಕಿತಗೊಂಡೆಅವರು ಸಂಪದದಲ್ಲಿ ಈ ಮಾತು ಬರೆದರು:


"ಅತ್ಯುತ್ತಮ ಕನ್ನಡ ಬ್ಲಾಗ್

ಈ ಬಾರಿಯ ಅತ್ಯುತ್ತಮ ಕನ್ನಡ ಇಂಡಿಕ್ ಬ್ಲಾಗ್ ಪ್ರಶಸ್ತಿ ಶ್ರೀರಾಮ್ ಅವರ "ಕನ್ನದವೇ ನಿತ್ಯ" ಬ್ಲಾಗಿಗೆ ಬಂದಿದೆ. ಇವರಗಳಿಗೆ ಕೆಳಗಿರುವ ಕೊಂಡಿ ನೊಡಬಹುದು.
http://indibloggies.org/results-2005


ಸರಿ ಖುಶಿಯಿಂದ ಫಲಿತಾಂಶಗಳಿದ್ದ ಕೊಂಡಿಯನ್ನರಸಿ ಹೊರಟೆ. ನನಗೆ ದೊರಕಿದ್ದು ಈ ಪದಕ.




ಹಾಗೂ ನನ್ನ ಬ್ಲಾಗಿಗೆ ಬಂದ ವೋಟುಗಳ ಸಂಖ್ಯೆ ಇದು.



ಶ್ರೀನಿಧಿಯವರ ಸಂದೇಶಕ್ಕೆ ಹೆಚ್.ಪಿ.ನಾಡಿಗ್ ಬರೆದ ಪ್ರತಿಕ್ರಿಯೆ ಇದು.


ಅರ್ಥವಿಲ್ಲದ ಅವಾರ್ಡು

ಅರ್ಥವಿಲ್ಲದ ಅವಾರ್ಡು, ಕಣ್ರೀ ಅದು. ಅವರು ಈ ಅವಾರ್ಡು ನಡೆಸಿದ ರೀತಿ ನೋಡಿದ್ರೆ ಅದಕ್ಕೆ ಒಂದಷ್ಟು ಪ್ರಾಮುಖ್ಯತೆ ಕೊಡುವುದೂ ನಿರರ್ಥಕ.

ಈ‌ ಅವಾರ್ಡು ನಡೆಸಿದವ ಕೆಲ ದಿನಗಳ ಹಿಂದೆ ಶ್ಯಾಮ್ ಕಶ್ಯಪ್ ರವರಿಗೆ ಬರೆದಿದ್ದ ಪತ್ರ ಅವರ ಮೂಲಕ ನನಗೂ ತಲುಪಿತ್ತು. ಅವರ ಕನ್ನಡ judgeಗೆ nominate ಮಾಡಲು ಕನ್ನಡ ಬ್ಲಾಗುಗಳೇ ಸಿಕ್ಕಿರಲಿಲ್ಲವಂತೆ! (ಮಾರಾಯನಿಗೆ ಕನ್ನಡ ಬ್ಲಾಗುಗಳೂ ಇವೆಯೆಂಬುದು ತಿಳಿದಿತ್ತೋ ಇಲ್ವೊ!) ಕೊನೆಗೆ ಶ್ಯಾಮ್ ರವರೇ ಶ್ರೀರಾಮ್ ರವರ ಬ್ಲಾಗನ್ನ, ಸಂಪದದಲ್ಲಿರುವ ಓ ಎಲ್ ಎನ್ ರವರ ಬ್ಲಾಗನ್ನ, ಇಸ್ಮಾಯಿಲ್ ರವರ ಬ್ಲಾಗನ್ನ nominate ಮಾಡಿದ್ರು.

ಪಬ್ಲಿಕ್ ಪೋಲ್ ನಡೆಸಿ ಕೊಡೋ ಅವಾರ್ಡುಗಳು ಎಷ್ಟು ಅರ್ಥಪೂರ್ಣವೆಂಬುದು ಎಲ್ಲರಿಗೂ ತಿಳಿದ ವಿಷಯವೇ. (Indian Idolನ ಪಬ್ಲಿಕ್ ಎಸ್ ಎಮ್ ಎಸ್ ಪೋಲ್ ಮಾಡಿರುವ ರಗಳೆ ಬಗ್ಗೆ ನ್ಯೂಸ್ ಕೇಳಲಿಲ್ಲವಾ?) ಅದೇನೆ ಇರಲಿ, ಸೈಟು ತುಂಬ ads ತುರುಕಿಕೊಂಡು ಕೊನೆಗೆ ಡೊನೇಶನ್ ಕೂಡ ತೆಗೆದುಕೊಳ್ಳುತ್ತಿರುವ ಈ ಅವಾರ್ಡು ನನಗೆ ಬೇರೇನನ್ನೋ ತಿಳಿಸುತ್ತಿದೆ.

ಅವಾರ್ಡುಗಳನ್ನು ಪಡೆಯುವವರ recognitionಗೆ ಅವಾರ್ಡುಗಳಿದ್ದಾಗ, ಒಂದು ತರಹ ಚೆನ್ನಾಗಿರುತ್ತೆ. ಆದರೆ ಅವಾರ್ಡು ಕೊಡುವವರು ತಮಗಾಗಿ spotlight ಹಾಗೂ attention ಸೃಷ್ಟಿಸಿಕೊಳ್ಳುವ ಸಾಧನವನ್ನಾಗಿ ಅವಾರ್ಡನ್ನು ಉಪಯೋಗಿಸಿಕೊಂಡಾಗ, ಅಥವಾ ದುಡ್ಡು ಮಾಡಿಕೊಳ್ಳುವ ರೀತಿ ಕಂಡುಕೊಂಡಾಗ ಅವಾರ್ಡು ನೀರಸವಾಗಿ ಕಾಣತ್ತೆ.


ಅದಕ್ಕೆ ಶ್ರೀನಿಧಿಯವರ ಪ್ರತಿಕ್ರಿಯೆ ಇದು.

ನಿಜ

ಸ್ವಲ್ಪ publicity stunt ಥರ ಕಾಣಿಸಿತು. ಆದರೆ ಅದರ ಹಿಂದಿರುವ ರಾಜಕಾರಣ ತಿಳಿದಿರಲಿಲ್ಲ. ನೆನ್ನೆ ಒಂದು ಬ್ಲಾಗ್ ನೊಡುತ್ತಿರುವಾಗ ಸಿಕ್ಕ ಕೊಂಡಿ. ಹಾಗೇ ಸಂಪದದಲ್ಲಿ ಹಾಕಿದೆ.


ಶ್ಯಾಮ್ ಈ ಸಂದೇಶವನ್ನ ನನಗೆ ಕಳಿಸಿದರು.

ನಿಮ್ಮ ಬ್ಲಾಗಿಗೆ indianbloggies.org ನ 'ಕನ್ನಡದ ಅತ್ಯುತ್ತಮ ಬ್ಲಾಗ್' ಬಿರುದು ಲಭಿಸಿದೆ. ಇದರ ಕೊಂಡಿ ಇಲ್ಲಿದೆ:http://indibloggies.org/results-2005
ಅಭಿನಂದನೆಗಳು!


ಇದಲ್ಲದೆಯೇ ಈ ಅವರ್ಡುಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಸಿಕ್ಕ ಕೊಂಡಿ, ಮತ್ತು ಮಾತುಗಳು ಇವು.

Y'know Suze, it sure is easy.

There's a poll for best Indiblog. First things first, there's a jury selected. A certain man with a widely read blog volunteers for the job.

Not a prob, babe, not at all. The prob, hey, that comes later. Watch.

Then the man nominates his own blog for the award. Yep, it's pretty darned sure he would get nominated anyway, seeing as how he runs a popular blog. (And someone else did nominate him). But check the 2005-12-20 entry here: the man was the first to nominate his own blog, just two days after nominations began.

I'm like, how desperate does a man get? I'm like, should a juror not have the sense not to nominate himself to a list he judges?

(I'm like, should a blogger who won the thing last year not withdraw anyway?)

And then he actually tells his readers, not once but twice, vote for megive me some of that love back. (Just as he did last year).

And I'm like, hey, is it any surprise that this man -- the one-time winner who lacks the grace to withdraw, the juror who nominates himself, the man who must go about asking for votes -- is it any surprise that he wins?

Such a thing as the spirit of a contest, Suze. Oooh yeah.



ಮೊದಲ ಬಾರಿಗೆ ಪಪ್ಪು ಪಾಸ್ ಹೋ ಗಯಾ... ಕುಛ್ ಮೀಠಾ ಹೋ ಜಾಯೆ???



No comments: